ಮಂಗಳವಾರ, ಅಕ್ಟೋಬರ್ 4, 2011

ಕಾವ್ಯಕ್ಕೆ ನಿಘಂಟಿನ ಅವಶ್ಯಕತೆ ಇಲ್ಲ : ಆರೀಫ್ ರಾಜಾ

ಕವಿ ತನ್ನ ಸುತ್ತಮುತ್ತಲಿನ ಆಗುಹೋಗುಗಳಿಗೆ ಫೀಲ್ ಮಾಡುವ ಗುಣ ಹೊಂದಿರಬೇಕು ಹೊರತು; ಆತನಿಗೆ ನಿಘಂಟಿನ ಅವಶ್ಯಕತೆ ಇಲ್ಲ ಎಂದು ಕವಿ ಆರೀಪ್ ರಾಜಾ ಅಭಿಪ್ರಾಯಪಟ್ಟರು. ಅವರು ದಿನಾಂಕ 25-9-2011ರಂದು ಭಾನುವಾರ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪಿ.ಲಂಕೇಶ ಬಳಗದಿಂದ ಏರ್ಪಡಿಸಿದ್ದ ಲಂಕೇಶ್ ಮತ್ತೆ ಮತ್ತೆ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಪಿ.ಲಂಕೇಶ್ ಲೇಖಕರ ಲೇಖಕರಾಗಿದ್ದರು. ಲಂಕೇಶರ ಟೀಕೆ ಟಿಪ್ಪಣಿಗಳು ಸಾಂಸ್ಕೃತಿಕ ಪಠ್ಯಗಳಾಗಿದ್ದವು. ಇಂದಿನ ಬಹುತೇಕ ಪತ್ರಿಕೆಗಳ ಅಂಕಣಕಾರರಲ್ಲಿ ಲಂಕೇಶರ ಸಾಹಿತ್ಯದ ಪ್ರಭಾವವನ್ನು ಕಾಣಬಹುದಾಗಿದೆ ಎಂದು ಅವರು ವಿಶ್ಲೇಷಿಸಿದರು. ಬಂಡಾಯ ಕವಿ ಪೀರ್ಬಾಷಾ ಅವರು ಮಾತನಾಡಿ, ಲಂಕೇಶರು ಕನರ್ಾಟಕದಲ್ಲಿ ಕಾಂಗ್ರೆಸ್ಸೇತರ ಸಕರ್ಾರವನ್ನು ಹುಟ್ಟು ಹಾಕುವಲ್ಲಿ ತಮ್ಮ ಪತ್ರಿಕೆಯನ್ನು ಅಸ್ತ್ರವಾಗಿ ಬಳಸಿದರು. ಅವರ ಆಶಯದಂತೆ ಕನರ್ಾಟಕದಲ್ಲಿ ಕಾಂಗ್ರೆಸ್ ಅಧಿಕಾರದಿಂದ ವಂಚಿತಗೊಂಡು ಜನತಾಪಕ್ಷ ಅಧಿಕಾರಕ್ಕೆ ಬಂದಿತು. ಆದರೆ ಜನತಾ ಪಕ್ಷ ಲಂಕೇಶರ ನಿರೀಕ್ಷೆಯಂತೆ ಸಾಮಾಜಿಕ ಕಳಕಳಿಯುಳ್ಳ ಪಕ್ಷವಾಗಿ ಕೆಲಸ ಮಾಡಲಿಲ್ಲ. ಅಂತಹ ಸಂದರ್ಭದಲ್ಲಿ ಲಂಕೇಶರು ತಮ್ಮ ಮೊನಚು ಬರಹದ ಮೂಲಕ ಟೀಕಿಸಿದರು ಎಂದರು. ಮುಂದುವರೆದು ಮಾತನಾಡಿದ ಅವರು, ಲಂಕೇಶ ಜ್ಞಾನಪೀಠ ಪ್ರಶಸ್ತಿಗೂ ಅರ್ಹರಾಗಿದ್ದರು. ಆದರೆ ಪ್ರಶಸ್ತಿ ಅವರಿಗೆ ದೊರೆಯಲಿಲ್ಲ. ಯಾವುದೇ ಪ್ರಶಸ್ತಿಗಳು ಪ್ರತಿಭೆಗೆ ಮಾನದಂಡವಾಗಲಾರವು. ಅವರು ಕನ್ನಡ ಸಾಹಿತ್ಯದಲ್ಲಿ ಗದ್ಯದ ಪ್ರಾಕಾರವನ್ನು ಬೆಳೆಸಿದ ಶ್ರೇಷ್ಠ ಸಾಹಿತಿಗಳಾಗಿದ್ದಾರೆ ಎಂದು ಬಣ್ಣಿಸಿದರು. ಕತೆಗಾರ ಕಲಿಗಣನಾಥ ಗುಡದೂರು ಮಾತನಾಡಿ ಯುವ ಕವಿಗಳು ಅಧ್ಯಯನಶೀಲರಾಗಿ ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ತೆರದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸುಮಾರು ಹತ್ತಕ್ಕೂ ಹೆಚ್ಚು ಯುವ ಕವಿಗಳು ಕವನಗಳನ್ನು ವಾಚಿಸಿದರು. ನಿವೃತ್ತ ಶಿಕ್ಷಕ ಕೃಷ್ಣಮೂತರ್ಿರಾವ್ ಅವರ ಕವನ, ಮಹಾಂತೇಶಸ್ವಾಮಿ ಮಲ್ಲದಗುಡ್ಡ ಅವರ ಎಷ್ಟೊ ತ್ತು ಎಂಬ ಕವನ ನೆರೆದ ಸಾಹಿತ್ಯಾಸಕ್ತರ ಗಮನ ಸೆಳೆದವು. ಉಳಿದಂತೆ ಗಿರೀಶ, ಅಂಬಮ್ಮ, ಅಮರೇಶ ಗಿಣಿವಾರ, ಸತೀಶ ನವಲಿ, ನಾಗರಾಜ ಮತ್ತಿತರರು ಕವನಗಳನ್ನು ವಾಚಿಸಿದರು. ಉಪನ್ಯಾಸಕ ಹುಡಸಪ್ಪ ಹುಡಸೂರು ಲಂಕೇಶರ ಅವ್ವ ಕವನವನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಲಂಕೇಶ್ ಕಾವ್ಯ ಸ್ಪಧರ್ೆಯಲ್ಲಿ ಬಹುಮಾನ ಪಡೆದ ರಾಘವೇಂದ್ರ, ಅಂಮರೇಶ ತುವರ್ಿಹಾಳ, ಸುವರ್ಣ ಸಿರವಾರ ಅವರಿಗೆ ಲಂಕೇಶ ಬಳಗದಿಂದ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಪ್ರಹ್ಲಾದ್ ಗುಡಿ ವಕೀಲರು ಉಪಸ್ಥಿತರಿದ್ದರು. ಪತ್ರಕರ್ತ ಡಿ.ಎಚ್.ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬಾದಲರ್ಿ ಸ್ವಾಗತಿಸಿದರು. ಕವಿ ನಾಗಣ್ಣ ಕಿಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಮಣ್ಣ ಹಿರೇಬೇರ್ಗಿ, ಬಿ.ಕೊಟ್ರೇಶ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಬಸವರಾಜ ಹಳ್ಳಿ, ಹಸಮಕಲ್ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ