ಮಂಗಳವಾರ, ಅಕ್ಟೋಬರ್ 4, 2011

ಲಂಕೇಶ್ ಪತ್ರಿಕೋದ್ಯಮಕ್ಕೆ ಸರ್ವಸ್ವ ಅಪರ್ಿಸಿಕೊಂಡಿದ್ದರು : ಗಂಗಾಧರ ಕುಷ್ಟಗಿ


ಪಿ.ಲಂಕೇಶ್ ಓರ್ವ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದರು. ಮೇಷ್ಟ್ರು ನೌಕರಿಯನ್ನು ಬಿಟ್ಟು ಪತ್ರಿಕೋದ್ಯಮಕ್ಕಾಗಿಯೇ ಸರ್ವಸ್ವವನ್ನು ಅಪರ್ಿಸಿಕೊಂಡಿದ್ದರು. ಅವರು ಕನ್ನಡಕ್ಕೆ ಶೂದ್ರತ್ವದ ದೀಕ್ಷೆ ನೀಡಿದವರು ಎಂದು ಪತ್ರಕರ್ತ ಗಂಗಾಧರ ಕುಷ್ಟಗಿ ಅಭಿಪ್ರಾಯಪಟ್ಟರು. ಅವರು ದಿನಾಂಕ 25-9-2011ರಂದು ಭಾನುವಾರ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪಿ.ಲಂಕೇಶ್ ಬಳಗದಿಂದ ಏರ್ಪಡಿಸಿದ್ದ ಲಂಕೇಶ್ ಮತ್ತೆ ಮತ್ತೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಲಂಕೇಶರ ವೈಚಾರಿಕ ದೃಷ್ಟಿಕೋನ ಅವರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿತ್ತು. ಕುವೆಂಪು ಅವರ ನಂತರ ಗದ್ಯ ಸಾಹಿತ್ಯಕ್ಕೆ ಹೊಸ ಕಸವು ನೀಡಿದವರು ಲಂಕೇಶರು. ಲಂಕೇಶರಂತೆ ತೇಜಸ್ವಿ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದವರು.ಈ ಹಿನ್ನೆಲೆಯಲ್ಲಿ ಸಿಂಧನೂರಿನಲ್ಲಿ ಹುಟ್ಟಿರುವ ಲಂಕೇಶ ಬಳಗ ಪ್ರಜಾಸತ್ತಾತ್ಮಕ ಮನಸ್ಸುಗಳುಳ್ಳ ಸಂಘಟನೆಯಾಗಿದೆ. ಜ್ವಲಂತ ಸಮಸ್ಯೆಗಳ ಬಗ್ಗೆಯೂ ಈ ಸಂಘಟನೆ ಚಿಂತನೆ ಮಾಡುವುದು ಅಗತ್ಯವಾಗಿದೆ ಎಂದರು. ಲಂಕೇಶ್ರ ಅವ್ವ ಕವನ ಅತ್ಯಂತ ಜನಪ್ರೀಯತೆ ಪಡೆಯಿತಲ್ಲದೆ, ಬಿ.ಬಿ.ಸಿ.ಚಾನೆಲ್ನಲ್ಲಿ ಪ್ರಪಂಚದಾದ್ಯಂತ ಪ್ರಸಾರವಾಗಿ ದಾಖಲೆ ನಿಮರ್ಿಸಿತು. ಹೊಸ ಹೊಸ ಪ್ರಯೋಗಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದು ಹೇಳಿದರು. ಸಂವಿಧಾನದ ಆಶಯಗಳನ್ನೇ ಕೋಮುವಾದಿಗಳು ಬುಡಮೇಲು ಮಾಡುತ್ತಿದ್ದಾರೆ. ಹೈ.ಕ.ಭಾಗದಲ್ಲಿ ಇನ್ನೂ ಪ್ಯೂಡಲಿಸಂನ ಬೇರುಗಳಿವೆ ಎಂದು ವಿಷಾದಿಸಿದರು. ಈ ಭಾಗದ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮುಂದಿದೆ. ಯುವಕವಿ ಆರಿಫ್ರಾಜಾ, ಕಥೆಗಾರ ಕಲಿಗಣನಾಥ ಗುಡದೂರು ಸೇರಿದಂತೆ ಅನೇಕ ಸಾಹಿತಿಗಳು ಹೊರಹೊಮ್ಮುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾವು 1990ರ ದಶಕದಲ್ಲಿ ಸಿಂಧನೂರಿನಲ್ಲಿ ಕಟ್ಟಿದ ಚಳವಳಿಗಳ ಬಗ್ಗೆ ಮೆಲುಕು ಹಾಕಿದ ಅವರು, ಆ ಸಂದರ್ಭದಲ್ಲಿ ಗದ್ರಟಗಿ ಅಮರೇಗೌಡರ ಮಾರ್ಗದರ್ಶನದಲ್ಲಿ ಬಿ.ಲಿಂಗಪ್ಪ, ಬಸವರಾಜ, ವೆಂಕನಗೌಡ ಗದ್ರಟಗಿ ಮುಂತಾದ ಗೆಳೆಯರ ಬಳಗ ಅಂದಿನ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದು ಸಣ್ಣ ಮಾತಲ್ಲ. ಆಗಲೂ ಸಹ ಕೋಮುವಾದಿ ಸಂಘಟನೆಗಳು ಹಾಗೂ ತಮ್ಮ ಮಧ್ಯೆ ಸಂಘರ್ಷಗಳು, ವೈಚಾರಿಕ ಭಿನ್ನತೆಗಳು, ಚಚರ್ೆಗಳು ನಡೆಯುತ್ತಿದ್ದವು ಎಂದು ಸ್ಮರಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ