ಭಾನುವಾರ, ಅಕ್ಟೋಬರ್ 16, 2011

ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆ -2011 : ಬಸವರಾಜ ಹೃತ್ಸಾಕ್ಷಿ ಸಿರಿವಾರ, ಆರೀಫ್ ರಾಜಾಗೆ ಬಹುಮಾನ



ಸಹೃದಯ ಕವಿ ಬಸವರಾಜ ಹೃತ್ಸಾಕ್ಷಿ ಸಿರವಾರ ಅವರ
' ಒಬ್ಬ ಅವ್ವ ಇರಲಿ, ಈ ಬಿಸಿಲ ಕೂಸುಗಳಿಗೆ' ಕವನ ಈ ಬಾರಿಯ ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕವನ ಸ್ಪಧರ್ೆಯಲ್ಲಿ (2011) ಪ್ರಥಮ ಬಹುಮಾನ ಪಡೆದಿದೆ. ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಸಿರವಾರದಲ್ಲಿ ಬಸವರಾಜ ಹೃತ್ಸಾಕ್ಷಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂ ಎರಡನೇ ಬಹುಮಾನ ಆರೀಫ್ ರಾಜಾ ಅವರ " ಬುಖರ್ಾ ಹೌಸಿನ ಮುಂದೆ' ಕವನಕ್ಕೆ ದೊರೆತಿದೆ. ಈ ಬಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನ ರಾಯಚೂರು ಜಿಲ್ಲೆಗೆ ದಕ್ಕಿರುವುದು ವಿಶೇಷ. ಈ ಹಿಂದೆಯೇ ಆರೀಫ್ ರಾಜಾ ಅವರ ಕವನ "ಜಂಗಮ ಪಕೀರನ ಜೋಳಿಗೆ'ಗೆ ಪ್ರಥಮ ಸ್ಥಾನ ದೊರೆತಿದ್ದನ್ನು ನಾವು ಸ್ಮರಿಸಬಹುದು.
ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗದೊಂದಿಗೆ ಜಿಲ್ಲೆಯ ಕೀತರ್ಿಯನ್ನು ಹೆಚ್ಚಿಸಿರುವ ಬಸವರಾಜ ಹೃತ್ಸಾಕ್ಷಿ ಸಿರವಾರ ಹಾಗೂ ಆರೀಫ್ ರಾಜಾ ಅವರಿಗೆ
ಹೃದಯಪೂರ್ವಕ ಅಭಿನಂದನೆಗಳು.
- ಪಿ.ಲಂಕೇಶ್ ಬಳಗ, ಸಿಂಧನೂರು (9880757380)

ಮಂಗಳವಾರ, ಅಕ್ಟೋಬರ್ 4, 2011



ಸಂಚಾಲಕ ಕೊಟ್ರೇಶ.ಬಿ.ಮಾತನಾಡುತ್ತಿರುವುದು.


ಲಂಕೇಶ್ ಮತ್ತೆ ಮತ್ತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತ್ಯಾಸಕ್ತರು ಹಾಗೂ ಲಂಕೇಶರ ಅಭಿಮಾನಿಗಳು.

ಕವಿ ನಾಗಣ್ಣ ಕಿಲಾರಿ ಮಾತನಾಡುತ್ತಿರುವುದು.

'ಲಂಕೇಶ್ ಮತ್ತೆ ಮತ್ತೆ' ಕಾರ್ಯಕ್ರಮದ ಭಾವ ಚಿತ್ರಗಳು...

ುಲ್ವರ್ಗ ವಿಶ್ವವಿದ್ಯಾಲಯಕ್ಕೆ ಬಿ.ಎಸ್.ಸಿ. ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾಥರ್ಿ ಹುಸೇನ್ಭಾಷಾ ಅವರನ್ನು ಪಿ.ಲಂಕೇಶ್ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.

ಲಂಕೇಶ್ರನ್ನು ಕನವರಿಸುತ್ತಾ...


ನೀಲು
ಮೊಟ್ಟೆ ಇಲ್ಲವಾಗಿ, ಮರಿ ಬೆಳೆದು
ಹಾಡಿ
ಎಲ್ಲೋ ಹಾರಿ ಹೋದ ಮೇಲೆ
ತೂಗಾಡುವ ಖಾಲಿ ಗೂಡಿನ
ದುಗುಡವ ಬಲ್ಲೆಯಾದರೆ
ಪ್ರೇಮವಿಲ್ಲದ ಎದೆಯ ಅರಿತಿರುವೆ
- ಪಿ.ಲಂಕೇಶ್

ಮಾಚರ್್ 6, 2011ರ ನಂತರ, ಲಂಕೇಶ್ರ ಕುರಿತು ಮತ್ತೊಂದು ಕಾರ್ಯಕ್ರಮ ಮಾಡುವ ಬಗ್ಗೆ ಗೆಳೆಯರೆಲ್ಲಾ ಚಚರ್ಿಸಿದೆವು. ಸೆಪ್ಟೆಂಬರ್ 25, 2011 ರಂದು ಭಾನುವಾರ ಕಾರ್ಯಕ್ರಮ ನಿಕ್ಕಿಯಾಯಿತು. ಈಗಾಗಲೇ ಮೊದಲು ಕಾಲೇಜ್ವೊಂದರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲಂಕೇಶ್ ಅಭಿಮಾನಿಗಳು ಹಾಗೂ ಅವರ ಸಾಹಿತ್ಯದ ಬಗ್ಗೆ ಒಲವಿರುವ ಸಹೃದಯ ಮನಸ್ಸುಗಳನ್ನು ಕಂಡುಕೊಂಡಿದ್ದ ನಾವು ಇನ್ನೂ ಚೆನ್ನಾಗಿಯೇ ಕಾರ್ಯಕ್ರಮ ಆಯೋಜಿಸಬೇಕೆಂಬ ತುಡಿತದೊಂದಿಗೆ ಕಾರ್ಯಪ್ರವೃತ್ತರಾದೆವು. ನಮ್ಮ ಆಹ್ವಾನಕ್ಕೆ ಲಂಕೇಶ್ರ ಜೊತೆಗೆ ಹಲವು ವರ್ಷಗಳಿದ್ದು ಅವರ ಒಡನಾಟ ಬಲ್ಲ ಗಂಗಾಧರ ಕುಷ್ಟಗಿ ಕಾರ್ಯಕ್ರಮಕ್ಕೆ ಬರಲು ಒಪ್ಪಿದರು. ಜನಪರ ಕಾಳಜಿಯ ಕವಿಗಳಾದ ಪೀರಬಾಷಾ ಹಾಗೂ ಕಾವ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಸಹೃದಯ ಕವಿಗಳಾದ ಆರೀಫ್ ರಾಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಿ.ಲಂಕೇಶ್ ಬಳಗದ ಕಾರ್ಯಕ್ರಮಕ್ಕೆ ಬೆನ್ನುತಟ್ಟಿದ್ದಲ್ಲದೆ ಹೊಸ ಐಡಿಯಾಗಳನ್ನು ನೀಡುವ ಮೂಲಕ ಮತ್ತಷ್ಟು ನಮ್ಮನ್ನು ಉತ್ತೇಜಿಸಿದರು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಿ ಶೋಭೆ ತಂದರು. ಕಾರ್ಯಕ್ರಮ ಮುಗಿದ ನಂತರ ಅನೇಕ ಯುವ ಮನಸ್ಸುಗಳು ಈ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದ್ದಕ್ಕೆ ಧನ್ಯವಾದ ಅಪರ್ಿಸಿದಾಗ. ನಮ್ಮ ಬಳಗ ಲಂಕೇಶ್ರನ್ನು ಕನವರಿಸುತ್ತಿರುವುದು ಸಾರ್ಥಕವೆನಿಸಿತು. ಕಾರ್ಯಕ್ರಮ ಆಯೋಜಿಸಲು ನಮಗೆಲ್ಲಾ ಮಾರ್ಗದರ್ಶಕರಾದ ಸಹೃದಯಿ ಕವಿಗಳಾದ ನಾಗಣ್ಣ ಕಿಲಾರಿ, ಡಿ.ಎಚ್.ಕಂಬಳಿ ಮತ್ತವರ ಪ್ರೋತ್ಸಾಹಕ್ಕೆ ಧನ್ಯವಾದ.
-ಬಸವರಾಜ ಹಳ್ಳಿ, ಹಸಮಕಲ್

ಕಾವ್ಯಕ್ಕೆ ನಿಘಂಟಿನ ಅವಶ್ಯಕತೆ ಇಲ್ಲ : ಆರೀಫ್ ರಾಜಾ

ಕವಿ ತನ್ನ ಸುತ್ತಮುತ್ತಲಿನ ಆಗುಹೋಗುಗಳಿಗೆ ಫೀಲ್ ಮಾಡುವ ಗುಣ ಹೊಂದಿರಬೇಕು ಹೊರತು; ಆತನಿಗೆ ನಿಘಂಟಿನ ಅವಶ್ಯಕತೆ ಇಲ್ಲ ಎಂದು ಕವಿ ಆರೀಪ್ ರಾಜಾ ಅಭಿಪ್ರಾಯಪಟ್ಟರು. ಅವರು ದಿನಾಂಕ 25-9-2011ರಂದು ಭಾನುವಾರ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪಿ.ಲಂಕೇಶ ಬಳಗದಿಂದ ಏರ್ಪಡಿಸಿದ್ದ ಲಂಕೇಶ್ ಮತ್ತೆ ಮತ್ತೆ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಪಿ.ಲಂಕೇಶ್ ಲೇಖಕರ ಲೇಖಕರಾಗಿದ್ದರು. ಲಂಕೇಶರ ಟೀಕೆ ಟಿಪ್ಪಣಿಗಳು ಸಾಂಸ್ಕೃತಿಕ ಪಠ್ಯಗಳಾಗಿದ್ದವು. ಇಂದಿನ ಬಹುತೇಕ ಪತ್ರಿಕೆಗಳ ಅಂಕಣಕಾರರಲ್ಲಿ ಲಂಕೇಶರ ಸಾಹಿತ್ಯದ ಪ್ರಭಾವವನ್ನು ಕಾಣಬಹುದಾಗಿದೆ ಎಂದು ಅವರು ವಿಶ್ಲೇಷಿಸಿದರು. ಬಂಡಾಯ ಕವಿ ಪೀರ್ಬಾಷಾ ಅವರು ಮಾತನಾಡಿ, ಲಂಕೇಶರು ಕನರ್ಾಟಕದಲ್ಲಿ ಕಾಂಗ್ರೆಸ್ಸೇತರ ಸಕರ್ಾರವನ್ನು ಹುಟ್ಟು ಹಾಕುವಲ್ಲಿ ತಮ್ಮ ಪತ್ರಿಕೆಯನ್ನು ಅಸ್ತ್ರವಾಗಿ ಬಳಸಿದರು. ಅವರ ಆಶಯದಂತೆ ಕನರ್ಾಟಕದಲ್ಲಿ ಕಾಂಗ್ರೆಸ್ ಅಧಿಕಾರದಿಂದ ವಂಚಿತಗೊಂಡು ಜನತಾಪಕ್ಷ ಅಧಿಕಾರಕ್ಕೆ ಬಂದಿತು. ಆದರೆ ಜನತಾ ಪಕ್ಷ ಲಂಕೇಶರ ನಿರೀಕ್ಷೆಯಂತೆ ಸಾಮಾಜಿಕ ಕಳಕಳಿಯುಳ್ಳ ಪಕ್ಷವಾಗಿ ಕೆಲಸ ಮಾಡಲಿಲ್ಲ. ಅಂತಹ ಸಂದರ್ಭದಲ್ಲಿ ಲಂಕೇಶರು ತಮ್ಮ ಮೊನಚು ಬರಹದ ಮೂಲಕ ಟೀಕಿಸಿದರು ಎಂದರು. ಮುಂದುವರೆದು ಮಾತನಾಡಿದ ಅವರು, ಲಂಕೇಶ ಜ್ಞಾನಪೀಠ ಪ್ರಶಸ್ತಿಗೂ ಅರ್ಹರಾಗಿದ್ದರು. ಆದರೆ ಪ್ರಶಸ್ತಿ ಅವರಿಗೆ ದೊರೆಯಲಿಲ್ಲ. ಯಾವುದೇ ಪ್ರಶಸ್ತಿಗಳು ಪ್ರತಿಭೆಗೆ ಮಾನದಂಡವಾಗಲಾರವು. ಅವರು ಕನ್ನಡ ಸಾಹಿತ್ಯದಲ್ಲಿ ಗದ್ಯದ ಪ್ರಾಕಾರವನ್ನು ಬೆಳೆಸಿದ ಶ್ರೇಷ್ಠ ಸಾಹಿತಿಗಳಾಗಿದ್ದಾರೆ ಎಂದು ಬಣ್ಣಿಸಿದರು. ಕತೆಗಾರ ಕಲಿಗಣನಾಥ ಗುಡದೂರು ಮಾತನಾಡಿ ಯುವ ಕವಿಗಳು ಅಧ್ಯಯನಶೀಲರಾಗಿ ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ತೆರದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸುಮಾರು ಹತ್ತಕ್ಕೂ ಹೆಚ್ಚು ಯುವ ಕವಿಗಳು ಕವನಗಳನ್ನು ವಾಚಿಸಿದರು. ನಿವೃತ್ತ ಶಿಕ್ಷಕ ಕೃಷ್ಣಮೂತರ್ಿರಾವ್ ಅವರ ಕವನ, ಮಹಾಂತೇಶಸ್ವಾಮಿ ಮಲ್ಲದಗುಡ್ಡ ಅವರ ಎಷ್ಟೊ ತ್ತು ಎಂಬ ಕವನ ನೆರೆದ ಸಾಹಿತ್ಯಾಸಕ್ತರ ಗಮನ ಸೆಳೆದವು. ಉಳಿದಂತೆ ಗಿರೀಶ, ಅಂಬಮ್ಮ, ಅಮರೇಶ ಗಿಣಿವಾರ, ಸತೀಶ ನವಲಿ, ನಾಗರಾಜ ಮತ್ತಿತರರು ಕವನಗಳನ್ನು ವಾಚಿಸಿದರು. ಉಪನ್ಯಾಸಕ ಹುಡಸಪ್ಪ ಹುಡಸೂರು ಲಂಕೇಶರ ಅವ್ವ ಕವನವನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಲಂಕೇಶ್ ಕಾವ್ಯ ಸ್ಪಧರ್ೆಯಲ್ಲಿ ಬಹುಮಾನ ಪಡೆದ ರಾಘವೇಂದ್ರ, ಅಂಮರೇಶ ತುವರ್ಿಹಾಳ, ಸುವರ್ಣ ಸಿರವಾರ ಅವರಿಗೆ ಲಂಕೇಶ ಬಳಗದಿಂದ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಪ್ರಹ್ಲಾದ್ ಗುಡಿ ವಕೀಲರು ಉಪಸ್ಥಿತರಿದ್ದರು. ಪತ್ರಕರ್ತ ಡಿ.ಎಚ್.ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬಾದಲರ್ಿ ಸ್ವಾಗತಿಸಿದರು. ಕವಿ ನಾಗಣ್ಣ ಕಿಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಮಣ್ಣ ಹಿರೇಬೇರ್ಗಿ, ಬಿ.ಕೊಟ್ರೇಶ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಬಸವರಾಜ ಹಳ್ಳಿ, ಹಸಮಕಲ್ ವಂದಿಸಿದರು.

ಲಂಕೇಶ್ ಪತ್ರಿಕೋದ್ಯಮಕ್ಕೆ ಸರ್ವಸ್ವ ಅಪರ್ಿಸಿಕೊಂಡಿದ್ದರು : ಗಂಗಾಧರ ಕುಷ್ಟಗಿ


ಪಿ.ಲಂಕೇಶ್ ಓರ್ವ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದರು. ಮೇಷ್ಟ್ರು ನೌಕರಿಯನ್ನು ಬಿಟ್ಟು ಪತ್ರಿಕೋದ್ಯಮಕ್ಕಾಗಿಯೇ ಸರ್ವಸ್ವವನ್ನು ಅಪರ್ಿಸಿಕೊಂಡಿದ್ದರು. ಅವರು ಕನ್ನಡಕ್ಕೆ ಶೂದ್ರತ್ವದ ದೀಕ್ಷೆ ನೀಡಿದವರು ಎಂದು ಪತ್ರಕರ್ತ ಗಂಗಾಧರ ಕುಷ್ಟಗಿ ಅಭಿಪ್ರಾಯಪಟ್ಟರು. ಅವರು ದಿನಾಂಕ 25-9-2011ರಂದು ಭಾನುವಾರ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪಿ.ಲಂಕೇಶ್ ಬಳಗದಿಂದ ಏರ್ಪಡಿಸಿದ್ದ ಲಂಕೇಶ್ ಮತ್ತೆ ಮತ್ತೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಲಂಕೇಶರ ವೈಚಾರಿಕ ದೃಷ್ಟಿಕೋನ ಅವರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿತ್ತು. ಕುವೆಂಪು ಅವರ ನಂತರ ಗದ್ಯ ಸಾಹಿತ್ಯಕ್ಕೆ ಹೊಸ ಕಸವು ನೀಡಿದವರು ಲಂಕೇಶರು. ಲಂಕೇಶರಂತೆ ತೇಜಸ್ವಿ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದವರು.ಈ ಹಿನ್ನೆಲೆಯಲ್ಲಿ ಸಿಂಧನೂರಿನಲ್ಲಿ ಹುಟ್ಟಿರುವ ಲಂಕೇಶ ಬಳಗ ಪ್ರಜಾಸತ್ತಾತ್ಮಕ ಮನಸ್ಸುಗಳುಳ್ಳ ಸಂಘಟನೆಯಾಗಿದೆ. ಜ್ವಲಂತ ಸಮಸ್ಯೆಗಳ ಬಗ್ಗೆಯೂ ಈ ಸಂಘಟನೆ ಚಿಂತನೆ ಮಾಡುವುದು ಅಗತ್ಯವಾಗಿದೆ ಎಂದರು. ಲಂಕೇಶ್ರ ಅವ್ವ ಕವನ ಅತ್ಯಂತ ಜನಪ್ರೀಯತೆ ಪಡೆಯಿತಲ್ಲದೆ, ಬಿ.ಬಿ.ಸಿ.ಚಾನೆಲ್ನಲ್ಲಿ ಪ್ರಪಂಚದಾದ್ಯಂತ ಪ್ರಸಾರವಾಗಿ ದಾಖಲೆ ನಿಮರ್ಿಸಿತು. ಹೊಸ ಹೊಸ ಪ್ರಯೋಗಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದು ಹೇಳಿದರು. ಸಂವಿಧಾನದ ಆಶಯಗಳನ್ನೇ ಕೋಮುವಾದಿಗಳು ಬುಡಮೇಲು ಮಾಡುತ್ತಿದ್ದಾರೆ. ಹೈ.ಕ.ಭಾಗದಲ್ಲಿ ಇನ್ನೂ ಪ್ಯೂಡಲಿಸಂನ ಬೇರುಗಳಿವೆ ಎಂದು ವಿಷಾದಿಸಿದರು. ಈ ಭಾಗದ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮುಂದಿದೆ. ಯುವಕವಿ ಆರಿಫ್ರಾಜಾ, ಕಥೆಗಾರ ಕಲಿಗಣನಾಥ ಗುಡದೂರು ಸೇರಿದಂತೆ ಅನೇಕ ಸಾಹಿತಿಗಳು ಹೊರಹೊಮ್ಮುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾವು 1990ರ ದಶಕದಲ್ಲಿ ಸಿಂಧನೂರಿನಲ್ಲಿ ಕಟ್ಟಿದ ಚಳವಳಿಗಳ ಬಗ್ಗೆ ಮೆಲುಕು ಹಾಕಿದ ಅವರು, ಆ ಸಂದರ್ಭದಲ್ಲಿ ಗದ್ರಟಗಿ ಅಮರೇಗೌಡರ ಮಾರ್ಗದರ್ಶನದಲ್ಲಿ ಬಿ.ಲಿಂಗಪ್ಪ, ಬಸವರಾಜ, ವೆಂಕನಗೌಡ ಗದ್ರಟಗಿ ಮುಂತಾದ ಗೆಳೆಯರ ಬಳಗ ಅಂದಿನ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದು ಸಣ್ಣ ಮಾತಲ್ಲ. ಆಗಲೂ ಸಹ ಕೋಮುವಾದಿ ಸಂಘಟನೆಗಳು ಹಾಗೂ ತಮ್ಮ ಮಧ್ಯೆ ಸಂಘರ್ಷಗಳು, ವೈಚಾರಿಕ ಭಿನ್ನತೆಗಳು, ಚಚರ್ೆಗಳು ನಡೆಯುತ್ತಿದ್ದವು ಎಂದು ಸ್ಮರಿಸಿದರು.