ಬುಧವಾರ, ಮಾರ್ಚ್ 16, 2011

ಲಂಕೇಶ್ ದಿಟ್ಟ ಹೋರಾಟಗಾರ : ಕವಿ ನಾಗಣ್ಣ ಕಿಲಾರಿ ಬಣ್ಣನೆ

ನೈತಿಕ ಎಚ್ಚರಿಕೆಯೊಂದಿಗೆ ಅತ್ಯಂತ ಕ್ರಿಯಾಶೀಲವಾಗಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕೃಷಿ ಮಾಡಿದ ಪಿ.ಲಂಕೇಶ ದಿಟ್ಟ ಹೋರಾಟಗಾರ ಎಂದು ಕವಿ ನಾಗಣ್ಣ ಕಿಲಾರಿ ಅಭಿಪ್ರಾಯ ಪಟ್ಟರು. ಅವರು ನಗರದ ಅನಿಕೇತನ ಕಾಲೇಜಿನಲ್ಲಿ ಲಂಕೇಶ್ರ 76ನೇ ಜನ್ಮ ದಿನಾಚರಣೆ ಅಂಗವಾಗಿ ಲಂಕೇಶ್ ಬಳಗದಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಕವಿಗೋಷ್ಠಿ ಹಾಗೂ ಲಂಕೇಶ್ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು. ಲಂಕೇಶ್ ಹೋರಾಟಗಾರರಾಗಿ, ವಿರೋಧ ಪಕ್ಷವಾಗಿ, ಸಂಘಟನೆಯಂತೆ ಕೆಲಸ ಮಾಡಿದರು. ಸಾಹಿತ್ಯ ಮತ್ತು ಪತ್ರಿಕೋದ್ಯಮದ ಮೂಲಕ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದ ಪರಿ ಎಲ್ಲರನ್ನು ಬೆರಗುಗೊಳಿಸುವಂತದ್ದು ಎಂದು ಹೇಳಿದರು. ಉಪನ್ಯಾಸಕ ವೃತ್ತಿಯಿಂದ ಪತ್ರಿಕಾ ರಂಗಕ್ಕೆ ಬಂದಿದ್ದ ಲಂಕೇಶ್ರು ಇಂಗ್ಲೀಷ್ ಸಾಹಿತ್ಯದ ಆಳ ಅಧ್ಯಯನ ಹೊಂದಿದ್ದರು. ಚಾಲ್ಸರ್್ ಬೋದಿಲೇರ್ನಂತರ ಅಪ್ರತಿಮ ಲೇಖಕರ ಸಂಕಲನಗಳನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಅನುವಾದ ಮಾಡಿದ ಕೀತರ್ಿ ಲಂಕೇಶ್ರಿಗೆ ಸಲ್ಲುತ್ತದೆ ಎಂದರು. ಕಥೆ, ಕಾದಂಬರಿ, ನೀಲು ಪದ್ಯ, ಟೀಕೆ ಟಿಪ್ಪಣೆ, ಅನುವಾದದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದ ಲಂಕೇಶ್ರು ಯುವ ಸಾಹಿತಿಗಳನ್ನು ರೂಪಿಸಿದರು. ಚಲನ ಶೀಲತೆಗೆ ಹೆಸರಾಗಿದ್ದ ಲಂಕೇಶ್ ಕೊನೆಯುಸಿರೆಳೆಯುವ ಮದ್ಯರಾತ್ರಿ ನೀಲು ಪದ್ಯವನ್ನು ಬರೆದು ಪುಸ್ತಕ ಓದುತ್ತಲೇ ಚಿರನಿದ್ರೆಗೆ ಜಾರಿದ್ದರು. ಇದನ್ನು ಗಮನಿಸಿದರೆ ಅವರಲ್ಲಿನ ಓದುಗ ಎಷ್ಟು ಕ್ರೀಯಾಶೀಲ ಮತ್ತು ಓದಿನ ಬಗ್ಗೆ ಅವರಲ್ಲಿನ ದಾಹ ಎಂತಹದ್ದು ಎಂದು ಗೊತ್ತಾಗುತ್ತದೆ. ಅವರಂತಹ ದಿಟ್ಟ, ಸಾಹಸಿ ಪತ್ರಕರ್ತ ಸಿಗುವುದು ತುಂಬಾ ವಿರಳ ಎಂದು ಹೇಳಿದರು. ಅನಿಕೇತನ ಕಾಲೇಜಿನ ಪ್ರಾಚಾರ್ಯ ಬಸವರಾಜ ಯಲಬುಗರ್ಿ ಮಾತನಾಡಿ ಎಪ್ಪತ್ತರ ದಶಕದಿಂದಲೂ ಲಂಕೇಶ್ರು ಪತ್ರಿಕಾ ರಂಗದಲ್ಲಿ ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ. ವಿರೋಧ ಪಕ್ಷಕ್ಕಿಂತಲೂ ಲಂಕೇಶ್ರ ಬಗ್ಗೆಯೇ ಹೆಚ್ಚಿನ ಭಯವನ್ನು ಅಂದಿನ ಸಕರ್ಾರಗಳು ಹೊಂದಿದ್ದವು. ಇದನ್ನು ಗಮನಿಸಿದರೆ ಲಂಕೇಶ್ರಲ್ಲಿ ಎಂತಹ ಶಕ್ತಿ ಅಡಗಿತ್ತು ಎನ್ನುವುದು ಅರ್ಥವಾಗುತ್ತದೆ ಎಂದು ಹೇಳಿದರು. ಪ್ರೌಢಶಾಲಾ ಶಿಕ್ಷಕ ಬೀರಪ್ಪ ಶಂಭೋಜಿ ಮಾತನಾಡಿ ಲಂಕೇಶ್ರಿಗೆ ಲಂಕೇಶರೇ ಸಾಟಿ. ಅವರ ಜನ್ಮ ದಿನಾಚರಣೆಯನ್ನು ಸಿಂಧನೂರಿನಂತಹ ನಗರದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿ ಲಂಕೇಶ್ರ ಕುರಿತು ರಚಿಸಿದ ಚುಟುಕುಗಳನ್ನು ವಾಚಿಸಿದರು. ಕಾಮರ್ಿಕ ಮುಖಂಡ ವೆಂಕನಗೌಡ ಗದ್ರಟಗಿ ಮಾತನಾಡಿ ಎಂಬತ್ತರ ದಶಕದಲ್ಲಿ ಲಂಕೇಶ್ ಪತ್ರಿಕೆಯದೇ ಸುದ್ದಿ. ಜನಸಾಮಾನ್ಯರಿಂದಿಡಿದು ರಾಜಕಾರಣಿಗಳು ಲಂಕೇಶ್ ಪತ್ರಿಕೆಯಲ್ಲಿ ಈ ಭಾರಿ ಯಾರದು ಗದ್ದಲ ಎನ್ನುವಂತೆ ನೋಡುತ್ತಿದ್ದರು. ಭ್ರಷ್ಟ ವ್ಯವಸ್ಥೆಯ ಹಾಗೂ ರಾಜಕಾರಣಿ ಮತ್ತು ಅಧಿಕಾರಿಗಳ ವಿರುದ್ದ ಸಮರ ಸಾರಿದ್ದ ಲಂಕೇಶ್ ಲೇಖನಿಯನ್ನು ಖಡ್ಗವಾಗಿ ಬಳಸಿದರು ಎಂದು ಹೇಳಿದರು. ಕೊಟ್ರೇಶ.ಬಿ., ರಾಮಣ್ಣ ಹಿರೇಭೇರಗಿ, ಖಲೀಲ್, ಚಂದ್ರಶೇಖರ ಬೆನ್ನೂರು, ಬಸವರಾಜ ಹಳ್ಳಿ ಹಸಮಕಲ್, ಹನುಮಂತಪ್ಪ ಗೂಳಿ, ಶಿವನಗೌಡ, ಷರೀಫ್ ಹಸಮಕಲ್, ಕೊಟ್ರೇಶ.ವೈ.ಎಂ ಮತ್ತಿತರರು ಕವನ ವಾಚಿಸಿದರು. ರಾಮಣ್ಣ ಹಿರೇಬೇರಿಗಿ ಕವಿಗಳ ಕವನ ಕುರಿತು ಮಾತನಾಡಿದರು. ಲಂಕೇಶ್ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕೊಟ್ರೇಶ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಸೇನಬಾಷಾ ನಿರೂಪಿಸಿದರು. ಬಸವರಾಜ ಬಾದಲರ್ಿ ವಂದಿಸಿದರು. ಉಪನ್ಯಾಸಕರಾದ ಹುಡಸಪ್ಪ ಹುಡಸೂರು, ಕಾಳಿಂಗರೆಡ್ಡಿ, ನಾರಾಯಣ ಬೆಳಗುಕರ್ಿ, ವೀರೇಶ ನಾಯಕ, ಹುಸೇನಪ್ಪ ಅಮರಾಪುರ, ಎಂ.ಭಾಸ್ಕರ್, ಇಮಾಮ್ ಹುಸೇನ್ ಎತ್ಮಾರಿ ಮತ್ತಿತರರು ಇದ್ದರು.
- ಬಸವರಾಜ ಹಳ್ಳಿ , ಹಸಮಕಲ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ