ಬುಧವಾರ, ಮಾರ್ಚ್ 16, 2011

ಹೀಗೆ ಹುಟ್ಟಿತು ಲಂಕೇಶ್ ಬಳಗ

ಸಿಂಧನೂರಿನಂತಹ ನಗರದಲ್ಲಿ ಸಾಹಿತ್ಯಿಕ ವಾತಾವರಣ ಸೃಷ್ಟಿ ಮಾಡಬೇಕೆನ್ನುವುದು ನನ್ನ ಬಹು ದಿನದ ಕನಸು. ಹಲವು ಬಾರಿ ಇದಕ್ಕೆ ವಿಫಲ ಯತ್ನ ನಡೆಸಿ ಸುಮ್ಮನಾಗಿದ್ದುಂಟು. ಮಾಚರ್್ 2ರಂದು ಹೊಟೇಲ್ವೊಂದರಲ್ಲಿ ಟೀ ಹೀರುತ್ತಾ ಕುಳಿತಿದ್ದ ಸಂದರ್ಭದಲ್ಲಿ ವೃತ್ತಿಯಲ್ಲಿ ಶಿಕ್ಷಕರಾಗಿರುವ ಗೆಳೆಯ ಕೊಟ್ರೇಶ.ಬಿ. ಕವಿಗೋಷ್ಠಿ ಬಗ್ಗೆ ಮಾತೆತ್ತಿದರು. ಹಾಗೆ ಹೀಗೆ ಮಾತನಾಡುತ್ತಾ ಏನಾದರೂ ಆಗಲಿ ಈ ಬಾರಿ ಕವಿಗೋಷ್ಠಿ ನಡಿಸಿಯೇ ಬಿಡೋಣ ಎನ್ನುವ ತೀಮರ್ಾನಕ್ಕೆ ಇಬ್ಬರು ಬಂದೆವು. ಆವಾಗ ನಮ್ಮಲ್ಲಿ ಉದಯಿಸಿದ್ದೇ ಲಂಕೇಶ್ ಬಳಗ. ಲಂಕೇಶ್ರ ಕುರಿತು ಆಳ ಅಧ್ಯಯನವಿರುವ ಸಿಂಧನೂರಿನ ಸಕರ್ಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಹಾಗೂ ಸಹೃದಯ ಕವಿ ನಾಗಣ್ಣ ಕಿಲಾರಿಯವರನ್ನು ದೂರವಾಣಿಯಲ್ಲಿ ಸಂಪಕರ್ಿಸಿ ವಿಷಯ ತಿಳಿಸಿದಾಗ ಅವರು ಲಂಕೇಶ್ರ ಕುರಿತು ಮಾತನಾಡಲು ಒಪ್ಪಿಕೊಂಡರು. ನಮಗೆ ಮತ್ತಷ್ಟು ಧೈರ್ಯ ಬಂತು. ಪತ್ರಿಕೆಗಳಲ್ಲಿ ಲಂಕೇಶ್ ಬಳಗದಿಂದ ಮಾ.6ರಂದು ಅನಿಕೇತನ ಕಾಲೇಜಿನಲ್ಲಿ ಕವಿಗೋಷ್ಠಿ ಹಾಗೂ ಲಂಕೇಶ್ರ 76 ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆವು. ಆವತ್ತು ಭಾರತ ಮತ್ತು ಐರ್ಲಂಡ್ ಕ್ರಿಕೆಟ್ ಪಂದ್ಯ ಹಾಗೂ ಪತ್ರಕರ್ತರೊಬ್ಬರ ವಿವಾಹ ಕಾರ್ಯಕ್ರಮದಿಂದ ಕವಿಗೋಷ್ಠಿ ಸಮಯವನ್ನು ಬೆಳಿಗ್ಗೆ 10 ಗಂಟೆಗೆ ಬದಲಾಯಿಸಲಾಯಿತು.
ಮಾಚರ್್ 5ರ ಶನಿವಾರ ಸಾಯಂಕಾಲದಿಂದ ಲಂಕೇಶ್ ಸಾಹಿತ್ಯಾಭಿಮಾನಿಗಳಿಗೆ, ಆಪ್ತರಿಗೆ ಕಾರ್ಯಕ್ರಮಕ್ಕೆ ಬರುವಂತೆ ಕೋರಿ ನಂತರ ರಾತ್ರಿ 9 ಗಂಟೆಗೆ ಲಂಕೇಶ್ ಬಳಗದ ಬ್ಯಾನರ್ ಹಾಕಿಸಲು ಗೆಳೆಯ ಇಮಾಮ್ ಹುಸೇನ್ಗೆ ಹೇಳಿ, ನಾಗಣ್ಣ ಕಿಲಾರಿ ಅವರ ರೂಂಗೆ ಕಾರ್ಯಕ್ರಮದ ರೂಪುರೇಷೆ ಕುರಿತು ಚಚರ್ಿಸಲು ನಾನು ಕೊಟ್ರೇಶ.ಬಿ, ಸಹೋದರರಾದ ಖಲೀಲ್, ಹುಸೇನ್ ಹೋದೆವು. ರಾತ್ರಿ 11 ಗಂಟೆಯವರೆಗೂ ಕಾರ್ಯಕ್ರಮದ ಬಗ್ಗೆ ಚಚರ್ಿಸಿ ಬಂದೆವು. ಆ ನಂತರ ಕೋಟ್ರೇಶ.ಬಿ. ನಾನು ಮೂರ್ನಾಲ್ಕು ದಿನದಲ್ಲೇ ಕಾರ್ಯಕ್ರಮ ನಡೆಸಲು ಮುಂದಾಗಿದ್ದೇವೆ ಹೇಗಾಗುತ್ತೋ ಏನೋ ಎಂದು ಆತಂಕದಿಂದ ಚಚರ್ಿಸಿದೆವಾದರೂ, ಬಂದಷ್ಟು ಗೆಳೆಯರು ಬರಲಿ ಎಂದು ಸುಮ್ಮನಾದೆವು. ಬೆಳಿಗ್ಗೆ 9 ಗಂಟೆಗೆ ಅನಿಕೇತನ ಕಾಲೇಜಿನ ತರಗತಿ ಕೊಠಡಿಯಲ್ಲಿ ಬ್ಯಾನರ್ ಕಟ್ಟಿ ಎಲ್ಲ ಅಣಿಗೊಳಿಸಿದೆವು. ನಾಗಣ್ಣ ಕಿಲಾರಿಯವರು ಬಂದರು. ಅಷ್ಟರಲ್ಲಿ ಚುಸಾಪ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ಕಾಮರ್ಿಕ ಮುಖಂಡ ವೆಂಕನಗೌಡ ಗದ್ರಟಗಿ ಅವರು ಬಂದಿದ್ದರು. 10 ಗಂಟೆ ಮೀರುತ್ತಾ ಬಂದರೂ ಏಳೆಂಟು ಜನರು ಮಾತ್ರ ಇದ್ದೆವು. ಇದರಿಂದ ಕಾರ್ಯಕ್ರಮ ಹೇಗಾಗುತ್ತೋ ಎಂದು ಆತಂಕಗೊಂಡಿದ್ದೆವು. ಆನಂತರ ಬಿ.ಸಿ.ಎಂ.ಹಾಸ್ಟೆಲ್ನ ವಿದ್ಯಾಥರ್ಿಗಳು, ವಿದ್ಯಾಥರ್ಿನಿಯರು ಸೇರಿದಂತೆ ಶಿಕ್ಷಕ ಬಳಗ ನಮ್ಮ ಮಿತ್ರರು ಬಂದರು. ಖಾಲಿ ಖಾಲಿ ಹೊಡೆಯುತ್ತಿದ್ದ ಕೊಠಡಿಯಲ್ಲಿ ಕೊನೆಗೆ ಕೂಡಲು ಜಾಗವಿಲ್ಲದೆ ಕೆಲವರು ಹೊರಗಡೆ ನಿಲ್ಲುವಂತಾಯಿತು. ಆವಾಗ ಲಂಕೇಶ್ ಬಳಗ ಎಷ್ದು ದೊಡ್ಡದಿದೆ ಎಂದು ತಿಳಿಯಿತು. ಕಾರ್ಯಕ್ರಮ ಮುಗಿದ ನಂತರ ಟಿ ಬಿಸ್ಕಿಟ್ಗೆ ವ್ಯವಸ್ಥೆ ಮಾಡಿದ್ದೆವು. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರೂ ಲಂಕೇಶ್ ಬಳಗದ ಕವಿಗೋಷ್ಠಿ ಮೂಲಕ ತಮ್ಮ ಬಹು ದಿನದ ಕವಿತೆ ಓದುವ ಕನಸನ್ನು ಈಡೇರಿಸಿದ್ದಕ್ಕೆ ಧನ್ಯವಾದ ಹೇಳಿದರು. ಅವರು ಧನ್ಯವಾದ ಹೇಳುತ್ತಿದ್ದಂತೆ ನಮ್ಮಲ್ಲಿ ಲಂಕೇಶ್ ಆಳವಾಗಿ ಬೇರೂರಿದರು.
ಲಂಕೇಶ್ ಬಳಗ ಜನ್ಮ ತಳೆಯಲು ಗೆಳೆಯರಾದ ಇಮಾಮ್ ಹುಸೇನ್ ಎತ್ಮಾರಿ, ಕೊಟ್ರೇಶ.ಬಿ, ಸಹೋದರರಾದ ಖಲೀಲ್, ಹುಸೇನಬಾಷಾ, ಉಪನ್ಯಾಸಕರಾದ ಡಿ.ಎಚ್.ಕಂಬಳಿ, ನಾಗಣ್ಣ ಕಿಲಾರಿ, ಯಮನಪ್ಪ ಪವಾರ್ ಅವರ ಸಹಕಾರ ಸ್ಮರಣೀಯ.
- ಬಸವರಾಜ ಹಳ್ಳಿ, ಹಸಮಕಲ್

2 ಕಾಮೆಂಟ್‌ಗಳು: